ಸ್ಮಾರ್ಟ್ ಫೋನಿನಲ್ಲಿ Instagram Reels ಡೌನ್ ಲೋಡ್ ಮಾಡುವ ಸರಳ ವಿಧಾನ ತಿಳಿಯಿರಿ

ಬಳಕೆದಾರರು Instagram ಪೋಸ್ಟ್‌ಗಳು ಮತ್ತು ಸ್ಟೋರಿಗಳನ್ನು ಸೇವ್ ಮಾಡಿಕೊಳ್ಳಬಹುದು. ಹೀಗೆ ಸೇವ್ ಮಾಡಿಕೊಂಡ ವಿಡಿಯೋಗಳನ್ನು ಯಾವಾಗ ಬೇಕಾದರೂ  ವೀಕ್ಷಿಸಬಹುದು. ಅದೇ ರೀತಿ, ಅದೇ ರೀತಿ, ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಸಹ ಸೇವ್ ಮಾಡಿಕೊಳ್ಳಬಹುದು, ಮಾತ್ರವಲ್ಲ ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಅದನ್ನು ಡೌನ್‌ಲೋಡ್ ಕೂಡಾ ಮಾಡಿಕೊಳ್ಳಬಹುದು.

Written by - Ranjitha R K | Last Updated : May 21, 2021, 05:05 PM IST
  • ಫೋಟೋ, ವೀಡಿಯೊ ಶೇರ್ ಮಾಡುವ Appಗಳಲ್ಲಿ ಇನ್ಸ್ಟಾಗ್ರಾಮ್ ಕೂಡಾ ಒಂದು.
  • ಇನ್‌ಸ್ಟಾಗ್ರಾಮ್ ಇದರಲ್ಲಿರುವ ಕಂಟೆಂಟ್ ಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸುವುದಿಲ್ಲ.
  • ಕೆಲ ವಿಧಾನಗಳನ್ನು ಅನುಸರಿಸುವ ಮೂಲಕ Instagram ಕಂಟೆಟ್ ಗಳನ್ನು ಡೌನ್‌ಲೋಡ್ ಮಾಡಬಹುದು.
ಸ್ಮಾರ್ಟ್ ಫೋನಿನಲ್ಲಿ Instagram Reels ಡೌನ್ ಲೋಡ್ ಮಾಡುವ ಸರಳ ವಿಧಾನ ತಿಳಿಯಿರಿ title=
Instagram ಕಂಟೆಟ್ ಗಳನ್ನು ಡೌನ್‌ಲೋಡ್ ಮಾಡಬಹುದು (file photo)

ನವದೆಹಲಿ : ಫೋಟೋ ಮತ್ತು ವೀಡಿಯೊ ಶೇರ್ ಮಾಡಲು ಇರುವ ಜನಪ್ರಿಯ ಅಪ್ಲಿಕೇಶನ್ ಗಳಲ್ಲಿ ಇನ್ಸ್ಟಾಗ್ರಾಮ್ ಕೂಡಾ ಒಂದು. ಹೆಚ್ಚಿನ ಸಂಖ್ಯೆಯ ಜನರು ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ವೀಕ್ಷಿಸುವುದರಲ್ಲೇ ಕಾಲ ಕಳೆಯುತ್ತಾರೆ. ಇನ್‌ಸ್ಟಾಗ್ರಾಮ್ ಇದರಲ್ಲಿರುವ ಕಂಟೆಂಟ್ ಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸುವುದಿಲ್ಲ. ಆದರೂ ಕೆಲ ವಿಧಾನಗಳನ್ನು ಅನುಸರಿಸುವ ಮೂಲಕ  Instagram ಕಂಟೆಟ್ ಗಳನ್ನು ಡೌನ್‌ಲೋಡ್ ಮಾಡಬಹುದು.

ಬಳಕೆದಾರರು Instagram ಪೋಸ್ಟ್‌ಗಳು ಮತ್ತು ಸ್ಟೋರಿಗಳನ್ನು ಸೇವ್ ಮಾಡಿಕೊಳ್ಳಬಹುದು. ಹೀಗೆ ಸೇವ್ ಮಾಡಿಕೊಂಡ ವಿಡಿಯೋಗಳನ್ನು ಯಾವಾಗ ಬೇಕಾದರೂ  ವೀಕ್ಷಿಸಬಹುದು. ಅದೇ ರೀತಿ, ಅದೇ ರೀತಿ, ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು (Instagram Reels) ಸಹ ಸೇವ್ ಮಾಡಿಕೊಳ್ಳಬಹುದು, ಮಾತ್ರವಲ್ಲ ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಅದನ್ನು ಡೌನ್‌ಲೋಡ್ ಕೂಡಾ ಮಾಡಿಕೊಳ್ಳಬಹುದು. ಮತ್ತು ವೀಡಿಯೊ ಪ್ಲೇಯರ್ ಅಪ್ಲಿಕೇಶನ್‌  ಸಹಾಯದಿಂದ ಅವುಗಳನ್ನು ಯಾವಾಗ ಬೇಕಾದರೂ ವೀಕ್ಷಿಸಬಹುದು. 

ಇದನ್ನೂ ಓದಿ : face book ಡಾಟಾ ಲೀಕ್ ಆಗುವುದನ್ನು ತಡೆಯಲು ಈ setting ಇಟ್ಟುಕೊಳ್ಳಿ..

ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಸೇವ್ ಮಾಡುವುದು ಹೇಗೆ ? 
- Instagram ರೀಲ್‌ಗಳನ್ನು ಸೇವ್ ಮಾಡಲು ಯಾವ Reels Video ಸೇವ್ ಮಾಡಬೇಕೋ ಅದನ್ನು ಒಪನ್ ಮಾಡಿ
- ನಂತರ ಅಲ್ಲಿ ಕಾಣುವ ಮೂರು ಡಾಟ್ ಐಕಾನ್ ಮೇಲೆ ಕ್ಲಿಕ್ ಮಾಡಿ.
-  ನಂತರ ಸೇವ್ ಬಟನ್ ಕ್ಲಿಕ್ ಮಾಡಿ.
-ಈಗ ಈ Reels ನೋಡಲು, ಸೆಟ್ಟಿಂಗ್‌ಗೆ ಹೋಗಿ ಮತ್ತು Account ಮೇಲೆ ಕ್ಲಿಕ್ ಮಾಡಿ ಮತ್ತು Save  ವಿಭಾಗಕ್ಕೆ ಹೋಗಿ. 
-ಇಲ್ಲಿ ನೀವು ಸೇವ್ ಮಾಡಿರುವ ಎಲ್ಲಾ Reels ನೋಡಬಹುದು 

ಇದನ್ನೂ ಓದಿ : Xiaomi Mi 10i 5G: 108MP ಕ್ಯಾಮೆರಾ ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ

Instagram Reels ಡೌನ್‌ಲೋಡ್ ಮಾಡುವುದು ಹೇಗೆ?
Instagram Reels ಡೌನ್‌ಲೋಡ್ ಮಾಡುವ ವಿಧಾನವೂ ತುಂಬಾ ಸುಲಭ. ಆನ್‌ಲೈನ್ ಟೂಲ್ಸ್ ಗಳನ್ನು ಬಳಸಿಕೊಂಡು ನೀವು ಅದನ್ನು ಸುಲಭವಾಗಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್ ಮಾಡಬಹುದು.
- ಇದಕ್ಕಾಗಿ, ನೀವು ಮಾಡಬೇಕಾಗಿರುವುದು ಇಷ್ಟೇ.. Reels Videoದ URL ಅನ್ನು ಆನ್‌ಲೈನ್ ಟೂಲ್ಸ್ ಗೆ ಪೇಸ್ಟ್ ಮಾಡಿ. ಇಷ್ಟಾದರೆ ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ವಿಡಿಯೋ ಡೌನ್‌ಲೋಡ್ ಆಗಿರುತ್ತದೆ. 
- ಇದಕ್ಕಾಗಿ ನೀವು Instafista ಮತ್ತು Ingrammer ಸೇರಿದಂತೆ ಇತರ ಆನ್‌ಲೈನ್ ಟೂಲ್ಸ್ ಗಳನ್ನು ಬಳಸಬಹುದು.
- ಇನ್‌ಸ್ಟಾಗ್ರಾಮ್ ರೀಲ್ಸ್ URL ಪಡೆಯಲು, ನೀವು  Reels Videoದಲ್ಲಿನ ಮೂರು ಡಾಟ್ ಐಕಾನ್‌ಗೆ ಹೋಗಿ Copy Link Option ಮೇಲೆ  ಕ್ಲಿಕ್ ಮಾಡಿ. URL ಕಾಪಿಯಾಗುತ್ತದೆ.
- ಇದಲ್ಲದೆ, Google Play Storeಗೆ ಹೋಗಿ, ಥರ್ಡ್ ಪಾರ್ಟಿ ಆ್ಯಪ್ ಮೂಲಕ ಕೂಡಾ Instagram Reelsಗಳನ್ನು ಡೌನ್‌ಲೋಡ್ ಮಾಡಬಹುದು.

ಇದನ್ನೂ ಓದಿ : WhatsApp New Feature: WhatsAppನಲ್ಲಿ ಬಂತು ಮತ್ತೊಂದು ಹೊಸ ವೈಶಿಷ್ಟ್ಯ, ಇಲ್ಲಿದೆ ಡೀಟೇಲ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News